Saturday, 22 August 2015

ಹಿಂದಿನ ಮನೆ ನಾಯಿ,,, ಮುಂದಿನ ಮನೆ ಬೆಕ್ಕು…... ನಡುವೆ ಏನೋ ಇದೆ...


ಚಿತ್ರ ಕ್ರಪೆ ; ಅಂತರ್ಜಾಲ
ಅಂದ ಹಾಗೆ  ನಮ್ಮ ಮನೆಯಲ್ಲಿ ನಾಯಿ ಬೆಕ್ಕು ಯಾವುದೂ ಇಲ್ಲ .ಮನೆಯಲ್ಲಿ ಹೇಳಿದರೆ ನೀನಿರುವಾಗ ಅವೆಲ್ಲ ಯಾಕೆ ಅಂತಾರೆ.ಇದು ನನ್ನ ನಿಯತ್ತಿಗೊ? ಅಲ್ಲ ಜಾಯಮಾನಕ್ಕೋಗೊತ್ತಿಲ್ಲ. ಅದೇನೆ ಆದ್ರು ಮನೆಯವರು ಹೇಳಿದ್ದರಲ್ಲಿ ತಪ್ಪಿಲ್ಲ.ಹಾಗೆಂದು ನಮ್ಮ ಮನೆಯ ಅಂಗಳದಲ್ಲಿ ನಾಯಿ ಬೆಕ್ಕುಗಳಿಗೇನು ಕೊರತೆಯಿಲ್ಲ  .ಒಂದು ಕಣ್ಣಿನ ಕಪ್ಪು ಬೆಕ್ಕು,ಕಾಲು ಮುರಿದ ಬಿಳಿ ನಾಯಿತುಳಸಿಗಿಟ್ಟ ದೀಪವನ್ನು ಬಿಡದ ಕಳ್ಳ ಬೆಕ್ಕು,ಊಟ ಮಾಡಿ ಕೈ ತೊಳೆಯುವಾಗ ಹಾಜರಿರುವ ಅವಕಾಶವಾದಿಗಳು, ಹೀಗೆ ಅನಾಥ,ಅವರಿಚಿತ.ಅನಾಮಿಕ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಕೆಲವೊಮ್ಮೆ ಶಾಸಕಾಂಗ ಸಭೆ,ಭಿನ್ನಮತ ,ಪಕ್ಷಾಂತರ,ಅಕ್ರಮ ಸಕ್ರಮ ಎಲ್ಲ ಮನೆ ಅಂಗಳದಲ್ಲೇ ನಡೆದಂತೆ ಭಾಸವಾಗುತ್ತದೆ.
ಅದರೆ ಇವೆಲ್ಲದರ ಮದ್ಯೆ ನನ್ನನ್ನು ಯಾವಾಗಲು ಅಕರ್ಷಿಸುವುದು ನಮ್ಮ ಹಿಂದಿನ ಮನೆ ನಾಯಿ ಕರಿ  ಟೈಗರ್  ಮತ್ತು ಮುಂದಿನ ಬೆಕ್ಕು, ಮೋತಿ  . ನೋಡಿದಾಗಲೆಲ್ಲ ಇವರ ಮದ್ಯೆ ಏನೋ ಇದೆ ಎಂದೆನಿಸುತ್ತದೆ.ಯಾಕೆಂದರೆ ಅವರ ನಡುವಿನ ಅನುಭಂದ.ದಿಕ್ಕು ದೆಸೆ ಇಲ್ಲದ ಅವೆಷ್ಟೋ ನಾಯಿ ಬೆಕ್ಕು ಗಳ ಮದ್ಯೆ ಇದು ವಿಭಿನ್ನ.ಅವರಿಬ್ಬರ ಪ್ರಪಂಚನೆ ಬೇರೆ. ಟೈಗರ್ ಮನೆ ಯಜಮಾನರು ಮಾಂಸಾಹಾರ ಬಿಟ್ಟು ಸಮಯವಾಗಿದೆ ಒಂದು ರೀತಿಯಲ್ಲಿ ಸ್ವಘೋಷಿತ ಬ್ರಾಹ್ಮಣರು.ಆದರೆ ಮುಂದಿನ ಮನೆ ಮೋತಿ ಮನೆಯವರ ಊಟಕ್ಕೆ ಏನಿಲ್ಲದಿದ್ದರು ಒಣ ಮೀನಿನ ತಲೆಯಾದರು ಬೇಕು.ಇಂಥ ವೈರುದ್ಯಗಳ ಮದ್ಯೆ ಹಂಚಿ ಬಾಳುವ ನೀತಿ ಅವರಿಬ್ಬರದ್ದು.

ಅಂದ ಹಾಗೆ ಅ ಮನೆಯವರು,ಮುಖ  ಕೊಟ್ಟು ಮಾತಾಡಿದ್ದೆ ನಾ ನೋಡಿಲ್ಲ.ಹಂಚಿ ತಿಂದದ್ದು ಇಲ್ಲ.ಅವರವರ ಕೆಲಸದಲ್ಲಿ ಮಗ್ನ..ಹೀಗಿರುವಾಗ ಇವೆಲ್ಲವನ್ನು ಈ ಮೂಖ ಪ್ರಾಣಿಗಳಿಗೆ ಕಲಿಸಿ ಕೊಟ್ಟವರು ಯಾರು? ನಮ್ಮ ಬದುಕು ಯಾಂತ್ರಿಕವಾಗಿದೆ,ಇಲ್ಲಿ ಸಾಮಾಜಿಕ ಜಾಲ ತಾಣಗಳು ಗೆಲ್ಲುತ್ತಿದೆ ಪ್ರೀತಿ ಸೋಲುತ್ತಿದೆ. ಸಂಬಂಧ ಸಂಶಯ ಜೊತೆಯಾಗುತ್ತಿದೆ.ಇದನ್ನು ನೋಡಿದಾಗ ಬುದ್ದಿವಂತ ಪ್ರಾಣಿ ಎಂದು ಕರೆಸಿಕೊಳ್ಲುವ ಮಾನವ ಪ್ರಾಣಿಗಳಿಂದಲು ಕಲಿಯಬೇಕಾದದ್ದು ಅನೇಕವಿದೆ ಎಂದೆನಿಸುತ್ತದೆ.


 ಅದೇನಿದ್ದರು ನಮ್ಮ ಹಿಂದಿನ ಮನೆ ನಾಯಿಗು ಮುಂದಿನ ಬೆಕ್ಕಿನ ನಡುವೆ ಏನಿದೆಯೋ ಗೊತ್ತಿಲ್ಲ.ಆದರೆ ನಮ್ಮ ಮನೆ ಅವರ ಮಧ್ಯೆ ಇದೆ.ಆ ಮನೆಯ ಜಗಲಿಯಲ್ಲಿ ಕೂತು ಅವರಿಬ್ಬರನ್ನು ನೋಡುವ ನನ್ನ ಕಣ್ಣುಗಳಿವೆ.

No comments: