ಕೊನೆತನಕ ಇರುವವರು ಯಾರೆಂದು ಗೊತ್ತಿಲ್ಲ
ನಿನ್ನೆತನಕ ಇದ್ದವರು
ಇಂದ್ಯಾಕೊ ಜೊತೆಗಿಲ್ಲ
ಹಣೆಬರಹವೆಂದರು ಹಲವು ಜನ
ಅನಿವಾರ್ಯವೆಂದರು ಕೆಲವು ಜನ
ಚಿತ್ರ ಕ್ರಪೆ ; ಅಂತರ್ಜಾಲ |
ಮುಂಡಾಸು ತೊಟ್ಟವರು,ತಂಡಾಸು ಇರದವರು
ಜಾತಕವ ಬರೆದವರು, ಪಾತಕವ ಮೆರೆದವರು
ಎಲ್ಲರು ನಂಬಿದ್ದು ಕಾಲಚಕ್ರವನು
ತಲೆಮೇಲೆ ಇಟ್ಟಿದ್ದು ಅವರವರ ಕೈಯನ್ನು
ನಾ ಬರುವ ದಾರಿಯನು ಹಿಂತಿರುಗಿ ನೋಡಿದರೆ
ತರಗೆಲೆಯು ಅಲ್ಲಿತ್ತು ,ವೀಳ್ಯದೆಲೆಯು ಜೊತೆಗಿತ್ತು
ಆಯ್ಕೆ ಮಾಡುವ ಮನಸು ಮತ್ತೇನನ್ನು ಕಾದಿತ್ತು
ಬೋದಿವ್ರಕ್ಷದ ಕೆಳಗೆ ಹಲವು ಜನ ನಿಂತರು
ಕುಂತು ನಿಂತವರೆಲ್ಲ ಬುದ್ದನನು ನೆನೆದರು
ಇಲ್ಲಿ ಯಾರು ಆಗಲೆ
ಇಲ್ಲ ಬುದ್ದ ಯಾಕೆಂದರೆ?
ಮನೆ ಮಠವ ತೊರೆಯಲು ಯಾರೂ ಇಲ್ಲ ಸಿದ್ದ
No comments:
Post a Comment