Wednesday, 9 September 2015

ಜಗಲಿ ಪ್ರಶ್ನೆ

90 ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ಮನೆಯ ಜಗಲಿಯಲ್ಲಿ ಕೂತು ಪ್ರಶ್ನೆಯೊಂದ ಕೇಳಿದ
ಜನನಕೊಂದು ಹೆಸರು ಕೊಟ್ಟು
ಜಾತಿ ಹೆಸರು ಜೊತೆಯಲಿಟ್ಟು
ಜಾತ್ಯಾತೀತನಾಗು ಎಂದರೇನು ಅರ್ಥವು ?

ಚಿತ್ರ ಕ್ರಪೆ ; ಅಂತರ್ಜಾಲ















ಅಂದು ಅವರು ಕೇಳಿದಂತ ಪ್ರಶ್ನೆ ಒಂದು  ಕಾಡಿದೆ
ಮುಂದೆ ನೀನು ದೊಡ್ಡದಾಗಿ ಏನು ಆಗಬೇಕಿದೆ
ಅಂದು ಕೇಳಿದಂತ ಪ್ರಶ್ನೆಗಿಂದು ಮನವು ಹೇಳಿದೆ
ಮತ್ತೆ ಮಗುವಾಗಬೇಕು  ಏನು ಮಾಡಲಿ?


ಮನೆಯಲ್ಲಿ ಹೇಳಿದಂತ ಮಾತು ಇಂದು ನೆನಪಿದೆ
ಪಕ್ಕದ ಮನೆ ಹುಡುಗನನ್ನು ನೋಡಿ ಕಲಿ ಎಂದಿದೆ
ಅಂದು ಕೇಳದಂತ ಮನಸು ಇಂದು ಕಲಿಯ ಹೊರಟರೆ
ಅವನು ಕೋಪದಲ್ಲಿ ಮನೆಯ ಬಿಟ್ಟು   ದಿನಗಳೆಷ್ಟೋ ಕಳೆದಿದೆ.......


ಜಗಲಿಯಲ್ಲಿ ಒಮ್ಮೆ ಕೂತರೆಷ್ಟೋ ಪ್ರಶ್ನೆ ಮನದಲಿ
ಏಕಾಂತ ನೀನು ಬರಿಯ ಮಾಯೆ ಅದ್ಯಾಕೆ  ಇಷ್ಟು  ಸರಪಳಿ
ದಯವಿಟ್ಟು ಇಷ್ಟ್ಟು ಕಾಡಬೇಡ. ಬರಲೆ ಬೇಡ ಹತ್ತಿರ. 
ಹುಡುಕಿದಷ್ಟು ಬರಹವಾದೆ ಇದುವೆ ನನ್ನ ಉತ್ತರ..........

No comments:

Post a Comment