ಅಜ್ಜಿಯ ಜೊತೆ ಅಜ್ಜ ಇದ್ದಾರೋ ಇಲ್ಲವೋ ಗೊತ್ತಿಲ್ಲ ಆದರೆ ಶುಂಠಿಯಂತು ಜೊತೆಗಿದೆ. ಹೌದು ಕರಾವಳಿ ಕರ್ನಾಟಕದ ತುಳು ಮಾತ್ರ ಭಾಷೆಯಾಗಿರುವ ಪ್ರದೇಶದಲ್ಲಿ ಆಡುನುಡಿಗಳಿಗೇನು ಕೊರತೆಯಿಲ್ಲ.ಅರ್ಥವನ್ನು ಹುಡುಕುವ ಗೋಜಿಗೆ ಹೋಗದೆ,ಬಾಯಿಯಿಂದ ಬಾಯಿಗೆ ಹರಿದು ಬರುವ ಇಂತಹ ಆಡುನುಡಿಗಳಲ್ಲಿ ಅರ್ಥವಿಲ್ಲದ್ದೆ ಹೆಚ್ಚು. ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ಅದೊಂದು ತಲೆಗೆ ಹುಳ ಬಿಟ್ಟಂತೆ.
ಚಿತ್ರ ಕ್ರಪೆ ; ಅಂತರ್ಜಾಲ |
ಶುಂಠಿ ಯಾರಿಗೆ ಗೊತ್ತಿಲ್ಲ ಹೇಳಿ.? ಇದರ ಕುಟುಂಬದ ಹೆಸರು ಜಿಂಜಿಬರೇಸಿಯಂತೆ .ಹಿಂದಿಯಲ್ಲಿ ಅದರಕ್, ತೆಲುಗಿನಲ್ಲಿ ಅಲ್ಲಂ, ತಮಿಳಿನಲ್ಲಿ ಇಂಜಿ , ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಶುಂಠಿ ತನ್ನ ಘಾಟಿನಿಂದಲೆ ಹೆಸರುವಾಸಿ . ಮಹಾರಾಷ್ಟ್ರ ಮಂದಿಗೆ ಅದರಕ್ ಹಾಕಿದ ಚಹನೇ ಬೇಕು. ಕರ್ನಾಟಕದಲ್ಲಿ ಶುಂಠಿ ತಂಬುಳಿಯಾದರೆ, ಆಂದ್ರದಲ್ಲಿ ಅಲ್ಲಂ ಪಚ್ಚಡಿ ಬಲು ಪ್ರಸಿದ್ದಿ. ಆದರೆ ಮಂಗಳೂರಿನಲ್ಲಿ ಯಾಕೋ ಗೊತ್ತಿಲ್ಲ ಶುಂಠಿ ಅಜ್ಜಿಯ ಜೊತೆ ಸೇರಿಕೊಂಡಿದೆ.
ಎಚ್ಚರವಿಲ್ಲದ ಮನಸ್ಥಿತಿಯಲ್ಲಿ ನನ್ನ ಬಾಯಿಂದಲು ಹೆಚ್ಚಾಗಿ ಬರುವ ಶಬ್ದ ಅಜ್ಜಿ ಶುಂಠಿಯ ಬಗ್ಗೆ ತಿಳಿಯುವ ಹುಚ್ಚು ಕುತೂಹಲ ಹೆಚ್ಚಾಗಿತ್ತು. ಕೆಲವರಂತು ಗ್ರಾನೀಸ್ ಜಿಂಜರ್ ಎಂದು ಹೇಳಿ ಸುಮ್ಮನಾಗುತ್ತಾರೆ. ನನ್ನ ಕುತೂಹಲಕ್ಕೆ ಅಸರೆಯಾದದ್ದು, ರೇಡಿಯೋ ಕೇಳುಗರ ಉತ್ತರ. ಅಜ್ಜಿಶುಂಠಿ ಎಂದರೇನು?ಅದರ ಹಿಂದಿನ ಕಥೆ ನಿಮಗೇನಾದರು ಗೊತ್ತಿದೆಯೇ? ಕೇಳಿz್ದÉ ತಡ ಪ್ರೀತಿಯ ಕೇಳುಗರಲ್ಲಿ ತಯಾರಾಗಿತ್ತು ಹಲವು ಕಥೆ.ಅದರಲ್ಲಿ ಒಂದಿಷ್ಟನ್ನು ನಿಮಗೆ ಹೇಳುತ್ತೇನೆ.
ಸುಮಾರು 200 ವರ್ಷಗಳ ಹಿಂದಿನ ಕಥೆಯಂತೆ.ಬ್ರಿಟೀಷರು ವ್ಯಾಪಾರ ವಹಿವಾಟಿಗಾಗಿ ಮಂಗಳೂರಿಗೆ ಬರುತ್ತಿದ್ದ ಸಮಯವದು. ಪ್ರಮುಖವಾಗಿ ಸಾಂಬಾರು ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದ ಮಂಗಳೂರಿಗರಲ್ಲಿ ಒಣಶುಂಠಿ ಕೂಡ ಮಾರಾಟದ ವಸ್ತುವಾಗಿತ್ತು.ಆದರೆ ಬ್ರಿಟೀಷರಿಗೆ ಹಸಿ ಶುಂಟಿಯ ಅಗತ್ಯವಿತ್ತು.ಅದನ್ನು ಹೇಳೋಣವೆಂದರೆ ಭಾಷೆಯ ಸಮಸ್ಯೆ. ಹೇಗಾದರು ಮಾಡಿ ಆಗ ಅರೆ ಬರೆ ಇಂಗ್ಲಿಷï ಕಲಿತಿದ್ದ ಹುಡುಗನಲ್ಲಿ ಹೋಗಿ ಹಸಿಶುಂಠಿಗೆ ತುಳುವಿನಲ್ಲಿ ಏನನ್ನುತ್ತಾರೆ ಎಂದು ಪರಂಗಿಯವರು ಕೇಳಿದಾಗ ಪಜ್ಜಿ ಶುಂಠಿ (ಹಸಿ ಶುಂಠಿ) ಎಂದು ಹೇಳುತ್ತಾನೆ .ಅದು ಬ್ರಿಟೀಷರ ಬಾಯಿಗೆ ಬಂದಾಗ ಅಜ್ಜಿ ಶುಂಠಿ ಎಂದಾಯಿತು .ಎಲ್ಲದರಲ್ಲು ಪೆದಂಬು (ಕೊಂಕು) ಹುಡುಕುವ ಕರಾವಳಿಗರು ಇದನ್ನು ಬಿಟ್ಟಿಯಾರೇ?
ಶುಂಠಿ ನೋಡಲು ಸಿಕ್ಕು ಕಟ್ಟಿದ ರೀತಿಯಲ್ಲಿ ಇರುವುದರಿಂದ ಅಜ್ಜಿಯ ಮುಖಕ್ಕು ಶುಂಠಿಗು ಸಾಮ್ಯತೆ ಇದೆ. ಇದರಿಂದಾಗಿ ಅಜ್ಜಿ ಶುಂಠಿ ಎಂದಾಯಿತು ಎನ್ನುವುದು ಒಬ್ಬರ ಅನಿಸಿಕೆಯಾದರೆ, ಹಿಂದಿನ ಕಾಲದಲ್ಲಿ ಏನೇ ಅಸೌಖ್ಯವಿದ್ದರು ಅಜ್ಜಿಗೆ ನೆನಪಾಗುತ್ತಿದ್ದದು ಶುಂಠಿ ಇದು ಕೂಡ ಕಾರಣವಾಗಿರಬಹುದು ಎನ್ನುತ್ತಾರೆ ಮತ್ತೊಬ್ಬರು. ಈ ರೀತಿಯ ಒಂದೊಂದು ಕಥೆಯನ್ನು ಕೇಳಿ ನನ್ನ ತಲೆಗೆ ನಾನೆ ಹುಳ ಬಿಟ್ಟಂತಾಗಿತ್ತು.
ಇವೆಲ್ಲದರ ಮಧ್ಯೆ ಅಜ್ಜಿ ಶುಂಠಿಗೆ ಕಮರ್ಷಿಯಲï ಟಚï ಸಿಕ್ಕಿದೆ. ಹೇಗಂತೀರಾ? ಕಳೆದ ವರ್ಷ ತೆರೆ ಕಂಡ ಉಳಿದವರು ಕಂಡಂತೆ ಸಿನೇಮದಲ್ಲು ಕೂಡ ಈ ಪದದ ಬಳಕೆ ಗಮನಾರ್ಹ.
=========================================================
ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದಿದ್ದರು ಅಪ್ಪೆ ತೆತ್ತಿ ,ಬೋಡ ಶೀರ ,ಅಜ್ಜಿ ಶುಂಠಿ. ಇಂತಹ ಶಬ್ದಗಳು ನನ್ನನು ಅಕರ್ಷಿಸಿತ್ತು. ಸಿನಿಮಾದಲ್ಲಿ ಇದರ ಬಳಕೆಯಿಂದ ಕರಾವಳಿಗರಿಗೆ ಇಷ್ಟವಾಗಬಹುದೆಂದು ಅದನ್ನು ಸಿನೆಮಾದಲ್ಲಿ ಅಳವಡಿಸಿದೆ ಇದರಲ್ಲಿ ನನ್ನದೇನಿಲ್ಲ ಎಲ್ಲವು ; ಉಳಿದವರು ಕಂಡಂತೆ.
ರಕ್ಷಿತ್ ಶೆಟ್ಟಿ
ನಟ,ನಿರ್ದೇಶಕ
=========================================================
ತುಳುವರ ಸಾಮಾನ್ಯವಾದ ಒಂದು ಆಡುನುಡಿ.ಓಬಿರಾಯನ ಕಾಲದ ಚಿಂತನೆಯಲ್ಲದೆ ಹೊಸತಲ್ಲ ಎಂಬುದಕ್ಕೆ ಸರ್ವೇಸಾಮಾನ್ಯ ಬಳಸುತ್ತಾರೆ.ನಮ್ಮಲ್ಲಿ ಅಜ್ಜಿ ಮದ್ದು ಬಹಳ ಪ್ರಸಿದ್ಧಿ. ಮಕ್ಕಳಿಗೆ ಕಾಯಿಲೆ ಕಸಾಲೆ ಬಂದಾಗ ಅಜ್ಜಿ ಗಿಡಮೂಲಿಕೆಗಳನ್ನು ಅರೆದು ಕಲಸಿ ಕೊಡುತ್ತಿದ್ದದು ವಾಡಿಕೆ . ಅದರಲ್ಲು ಶುಂಠಿ ಎಲಾದಕ್ಕು ರಾಮಬಾಣ.ಬೇರೆ ಯಾವ ಮದ್ದು ತಿಳಿಯದ ಅಜ್ಜಿಯವರಿಗೆ ಈ ಶುಂಠಿಯೆ ಅಸ್ತ್ರ.ಅಜ್ಜಿ ಕೊಟ್ಟದ್ದು ದಿವ್ಯ ಔಷಧ ಎಂಬ ನಂಬಿಕೆಯುಳ್ಳ ಮಕ್ಕಳಿಗೆ ಆ ಕಾಯಿಲೆ ವಾಸಿಯಾಗಲು ಅದೇ ಸಾಕಾಗುತ್ತಿತ್ತು.ಅದಕ್ಕಾಗಿಯೆ ಹೆಚ್ಚು ಗೊತ್ತಿಲ್ಲದವರು ನಡುವೆ ಬಾಯಿ ಹಾಕಿದರೆ ನಿನ್ನದೇನು ಅಜ್ಜಿ ಶುಂಠಿ ಎನ್ನುತ್ತಾರೆ.ಅಂದರೆ ಎಲ್ಲದಕ್ಕು ಒಂದೇ ರಾಗ ಎಂದರ್ಥ.
Add caption |
ಬಾಸ್ಕರ್ ರೈ ಕುಕ್ಕುವಳ್ಳಿ
ಪ್ರಾದ್ಯಾಪಕ , ತುಳು ಅಕಾಡೆಮಿ ಮಾಜಿ ಸದಸ್ಯ
========================================================
ಈ ಶಬ್ದದ ಹುಟ್ಟಿನ ಕುರಿತು ಅಲೋಚಿಸಿದರೆ ಅಜ್ಜಿ ಅಂದರೆ ಸುಕ್ಕು ಕಟ್ಟಿದ ಅನ್ನುವ ಅರ್ಥ ಬಂದರೆ ಶುಂಠಿ ಅಂದರೆ ಖಾರವಾದ ಅನ್ನುವ ಅರ್ಥ ಬರುತ್ತದೆ. ಶುಂಠಿಯಲ್ಲೂ ಸುಕ್ಕು ಕಟ್ಟಿದ ಶುಂಠಿಗೆ ಅಜ್ಜಿಶುಂಠಿ ಎಂದು ಕರೆಯುವುದು ರೂಢಿಯಲ್ಲಿದೆ.
ಅಜ್ಜಿಶುಂಠಿ ಅಂದಾಗ ಅದಕ್ಕೆ ಸರಿಯಾದ ಅರ್ಥ ದಿಂದ ಬಳಕೆಗೆ ಬಂದಂತೆ ಕಾಣಬರುವುದಿಲ್ಲ. ಯಾವುದೋ ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ ಮಾತುಗಳನ್ನು ಆಡಿದರೆ ಅಥವಾ ಅಪಥ್ಯ ಮಾತುಗಳನ್ನು ಆಡಿದರೆ ನಿನ್ನ ಅಜ್ಜಿಶುಂಠಿ ಎಂಬುದಾಗಿ ತಮಾಷೆಗಾಗಿ ರೂಢಿಗೆ ಬಂದಿರುವಂತೆ ಕಾಣುತ್ತದೆ.
ಅಜ್ಜಿಶುಂಠಿ ಎಂದು ಯಾರಾದರೂ ಹೇಳಿದರೆ ಅದು ಒಳ್ಳೆಯವರು ಹೇಳುವ ಮಾತು ಅಲ್ಲ ಎಂಬ ಭಾವನೆ ಕೂಡಾ ಕೆಲವರಲ್ಲಿದೆ. ಯಾವುದಾದರೂ ವಿಷಯದಲ್ಲಿ ಜಗಳವಾಗುವ ಸಂದರ್ಭದಲ್ಲಿ `ನಿನ್ನ ಅಜ್ಜಿಶುಂಠಿ ಎಂದು ಹೇಳುವುದನ್ನು ಅನೇಕ ಬಾರಿ ಕೇಳುತ್ತೇವೆ. ಆದರೆ ಅದಕ್ಕೆ ಇಂತಹದ್ದೆ ಅರ್ಥ ಇದೆ ಎಂದು ನನಗೆ ಅನ್ನಿಸುತ್ತಿಲ್ಲ.
| ಡಾ, ಕಿಶೋರ್ ಕುಮಾರ್ ರೈ., ಶೇಣಿ
ಪ್ರಾಂಶುಪಾಲರು
ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು
=======================================================
ಸಾರಸ್ವತ ಲೋಕ ಎಷ್ಟು ಕಲಿತರು ಮುಗಿಯದಷ್ಟು ಶಬ್ದಗಳನ್ನು, ಅರಗಿಸಿಕೊಳ್ಳಲಾರದಷ್ಟು ವಿಚಾರಗಳನ್ನು ಕೊಟ್ಟಿದೆ.ಅವೆಲ್ಲವನ್ನು ಮೀರಿ ಒಂದಿಷ್ಟು ನುಡಿಗಳು ಜನರಿಗೆ ಬೇಗ ಹತ್ತಿರವಾಗಿ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗದಿz್ದÁಗ ನಮ್ಮ ನಮ್ಮ ಅನಿಸಿಕೆಗಳೇ ಆ ಪದದ ಅರ್ಥವಾಗುತ್ತದೆ.ಅದೇನೆ ಆದರು ತನ್ನ ಮನೆಯ ಹಿರಿಯರನ್ನು ಕೊನೆಗಾಲದಲ್ಲಿ ಅನಾಥಾಶ್ರಮಗಳಿಗೆ ಬಿಟ್ಟುಬಿಡುವ ವಂಶೋದ್ದಾರಕರಿರುವ ಸಮಯದಲ್ಲಿ ,ಶುಂಠಿಯಾದರು ಅಜ್ಜಿಯನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಿದೆ ಅನ್ನೋದೆ ಸಮಾಧಾನ.
ಅಭಿಷೇಕ್ ಜೆ ಶೆಟ್ಟಿ ಪಡೀಲ್
ಕಾರ್ಯಕ್ರಮ ನಿರೂಪಕ ,ರೇಡಿಯೊ ಸಾರಂಗ್ 107.8 FM ಮಂಗಳೂರು
No comments:
Post a Comment