ಚಿತ್ರ ಕ್ರಪೆ ; ಅಂತರ್ಜಾಲ |
ಬೇಡಿದನೆಲ್ಲವ ದೇವರು ಕೊಟ್ಟರೆ ಪೂಜೆಯ ಮಾಡುವರಾರು?
ಬಯಸಿದ್ದೆಲ್ಲವು ಈಡೇರುತ ಹೋದರೆ ಹರಕೆಯ ಕೊಡುವವರಾರು?
ನಂಬಿಕೆ ಅನ್ನೋ ಮೂರಕ್ಷರದಿ
ಜಗವಿಧು ನಿಂತಿದೆ ಇಂದು
ಹರಕೆಗೆ ಬಿಟ್ಟ ಕುರಿಯನು
ಕೇಳಿದೆ ನಿನಗೆಷ್ಟು ದಿನ
ಸಣ್ನಗೆ ಉರಿಯುವ
ದೀಪವ ಕೇಳಿದೆ ನಿನಗೆಷ್ಟು ಕ್ಷಣ
ಎಲ್ಲರು ಹೇಳುವುದೊಂದೇ
ಉತ್ತರ ಇದ್ದಷ್ಟು ದಿನ
ನಗುತಲಿ ಜೀವನ ನಡೆಸಲೆ
ಬೇಕು ಬದುಕಿದಷ್ಟು ದಿನ
ಹೆಸರನು ಬಿಟ್ಟು
ಹೋದವರೆಷ್ಟೋ ?
ಹೆಸರೇ ಇಲ್ಲದೆ ಕಳೆದವರೆಷ್ಟೋ
?
ಹೆಸರನು ಗಳಿಸುವ
ತವಕದಲಿ, ತಾಳವೆ ತಪ್ಪಿದ ವೇಳೆಯಲಿ
ಇನ್ನೂ ಮುಗಿಯದ ಬದುಕಿನ
ಪಯಣದ ಉಸಿರನೆ ನಿಲ್ಲಿಸಿ ಹೋದವರೆಷ್ಟೋ
ದಿನಗಳು ಉರುಳಿದೆ
ಮನವಿದು ಮರೆತಿದೆ, ಕಣ್ಣಿದು ನೋಡಿದೆ ಇತಿಹಾಸವನು
ನಿನ್ನೆಯ ತಪ್ಪಿನ
ಅವಲೋಕನವಿರಲಿ
ನಾಳೆಯ ದಿನದ ನಿರೀಕ್ಷೆಯು
ಇರಲಿ
ಇಂದಿನ ದಿನವಿದು
ನಮ್ಮದಾಗಲಿ ಎನ್ನುತ ಸಾಗುವ ಮುಂದೆ...........
No comments:
Post a Comment