ಮೊದಲ ಗುರು
ಚಿತ್ರ ಕ್ರಪೆ ; ಅಂತರ್ಜಾಲ |
ನನ್ನ ನಾ ಮರೆತಿರಲು ಸೆಲ್ಫಿ ಕ್ಲಿಕ್ಕಿಸುತಿರಲು
ನನ್ನವ್ವ ಕೇಳಿದಳು ಕುತೂಹಲದಿ
ಪ್ರಶ್ನೆ ಯದು ಸಾಮಾನ್ಯ ಕಲಿಸಿಕೊಡಬೇಕಂತೆ
ಫೊಟೊ ಹೇಗೆ ತೆಗೆಯುವುದು ಮೊಬೈಲಿನಲಿ!
ಮೊಬೈಲಿನ ಒಳ ಹೊಕ್ಕು ಪೂರ್ತಿ ಜಾಲಾಡಿರಲು
ಬೆರಳ ತುದಿಯಲ್ಲಿಯೆ ವಿಶ್ವವನು ನೋಡಿರಲು
ಅವಳ ಪ್ರಶ್ನೆ ಬಲು ಬಾಲಿಶ ಎನಿಸಿರಲು
ಒಳಗೊಳಗೆ ನಾ ನಕ್ಕೆ ಆ ಪ್ರಶ್ನೆಗೆ
ಇನ್ನೇನು ಹೇಳೋಣವೆಂದು ತಲೆ ಎತ್ತಿದೆ
ಎದುರಿದ್ದ ತಾಯ ಮೊಗವೊಮ್ಮೆ ನೋಡಿದೆ
ಅವಳ ಮಂದಸ್ಮಿತ ಮುಗ್ದ ಮುಖ ಹೇಳುತಿದೆ
ನಾ ಚಡ್ಡಿ ಹಾಕಲು ನಿನಗೆ ಕಲಿಸಿದಾಕೆ...
No comments:
Post a Comment